Home Uncategorized Rishabh Shetty: ದೇಸಿ ಉಡುಗೆಯಲ್ಲಿ ಮಿಂಚಿದ ನಟ ರಿಷಬ್ ಶೆಟ್ಟಿ ದಂಪತಿ, ಇಲ್ಲಿವೆ ನೋಡಿ ವೈರಲ್ ಫೋಟೋಸ್

Rishabh Shetty: ದೇಸಿ ಉಡುಗೆಯಲ್ಲಿ ಮಿಂಚಿದ ನಟ ರಿಷಬ್ ಶೆಟ್ಟಿ ದಂಪತಿ, ಇಲ್ಲಿವೆ ನೋಡಿ ವೈರಲ್ ಫೋಟೋಸ್

0
Rishabh Shetty: ದೇಸಿ ಉಡುಗೆಯಲ್ಲಿ ಮಿಂಚಿದ ನಟ ರಿಷಬ್ ಶೆಟ್ಟಿ ದಂಪತಿ, ಇಲ್ಲಿವೆ ನೋಡಿ ವೈರಲ್ ಫೋಟೋಸ್

ಸ್ನೇಹಿತರೆ ಕ್ಲಾಪ್ ಬಾಯ್ ಆಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದಂತಹ ರಿಷಬ್ ಶೆಟ್ಟಿ (Rishabh Shetty) ಅವರು ತುಗ್ಲಕ್ ಚಿತ್ರದ ಮೂಲಕ ತಮ್ಮ ನಟನೆಯ ಪ್ರಾರಂಭ ಮಾಡಿದರು. ಆನಂತರ ಸಾಕಷ್ಟು ಚಿತ್ರಗಳಲ್ಲಿ ಸಹನಟನಾಗಿ ಪೋಷಕ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದರು. ಬೆಲ್ ಬಾಟಮ್ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಯಶಸ್ಸನ್ನು ಕಂಡಂತಹ ರಿಷಬ್ ಶೆಟ್ಟಿ (Rishabh Shetty) ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಿರ್ದೇಶನದಲ್ಲಿಯೂ ತಮ್ಮ ಕೈಚಳಕವನ್ನು ತೋರಿದರು.

ಇಂದು ಕಾಂತರಾ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ವೃತ್ತಿ ಬದುಕಿನ ಪಯಣದಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿರುವಂತಹ ರಿಷಬ್ ಶೆಟ್ಟಿ ಅವರು ಸದ್ಯ ತಮ್ಮ ಕಾಂತಾರ ಭಾಗ ಎರಡರ ತಯಾರಿಯಲ್ಲಿದ್ದು ಎಲ್ಲವೂ ಅಂದುಕೊಂಡ ಹಾಗೆ ನೆರವೇರಿದರೆ ಸಿನಿಮಾ ಮುಂದಿನ ವರ್ಷದಲ್ಲಿ ಇದ್ದರೆ ಕಾಣಲಿರುವ ಅಧಿಕೃತ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಸಿನಿಮಾ ತಯಾರಿ ಕೆಲಸಗಳ ನಡುವೆಯೂ ತಮ್ಮ ಮನೆಯವರಿಗೆ ಸಮಯ ನೀಡುವುದನ್ನು ಎಂದಿಗೂ ಮರೆಯದಂತಹ ರಿಷಬ್ ಶೆಟ್ಟಿ (Rishabh Shetty) ಅವರು ಮನೆಯಲ್ಲಿ ನಡೆಯುವಂತಹ ಎಲ್ಲಾ ಶುಭ ಕಾರ್ಯಗಳು ಹಬ್ಬ ಹರಿದಿನಗಳನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ವೈರಲಾಗುತ್ತಿರುತ್ತಾರೆ. ಅದರಂತೆ ತಮ್ಮ ಬಿಡುವಿನ ಸಮಯದಲ್ಲಿ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ಸಾಂಪ್ರದಾಯಿಕವಾಗಿ ಸಿಂಗರಿತಗೊಂಡು

ತಮ್ಮ ಮಕ್ಕಳಿಗೂ ಕೂಡ ಸಾಂಪ್ರದಾಯಕ ಉಡುಪನ್ನು ಧರಿಸಿ ಬಹಳ ಟ್ರೆಡಿಶನಲ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಕೆಲ ಸುಂದರ ಚಿತ್ರಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಗತಿ ಶೆಟ್ಟಿ (Pragathi Shetty) ಅವರು ಕುಟುಂಬ ತುಂಬಿದ ಕ್ಷಣಗಳ ಮೂಲಕ ಪ್ರತಿ ಪ್ರೀತಿ ತುಂಬಿದ ಗ್ಯಾಲರಿಯನ್ನು ರಚಿಸುವುದು ಎಂಬ ಸುಂದರವಾದ ಕ್ಯಾಪ್ಷನ್ ಬರೆದು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಯತಪ್ರಕಾರ ವಿಜಿತ್ (Vijith)ಅವರ ಅದ್ಭುತ ಕ್ಯಾಮೆರಾ ಕೈಚಳಕದಲ್ಲಿ ರಿಷಬ್ ಶೆಟ್ಟಿ ಅವರ ಸುಂದರ ಕುಟುಂಬದ ಫೋಟೋಗಳು ಮೂಡಿಬಂದಿವೆ.